ಗದಗ: RCB ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳ ಸಾವು ಅತ್ಯಂತ ನೋವಿನ ಸಂಗತಿ: ಶಾಸಕ ಸಿ.ಸಿ ಪಾಟೀಲ
Gadag, Gadag | Jun 5, 2025 RCB ಸಂಭ್ರಮಾಚರಣೆ ವೇಳೆ 11 ಅಭಿಮಾನಿಗಳ ಸಾವು ಪ್ರಕರಣ ಬಹಳ ನೋವಿನ ಸಂಗತಿಯಾಗಿದೆ ಎಂದು ಮಾಜಿ ಸಚಿವ ಶಾಸಕ ಸಿ.ಸಿ ಪಾಟೀಲ ಹೇಳಿಕೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕಾಂಗ್ರೆಸ್ ಬೇಜವಾಬ್ದಾರಿ ಸರ್ಕಾರ. ಅತ್ಯಂತ ನಿರ್ಲಕ್ಷ್ಯದಿಂದಾಗಿ 11 ಕುಟುಂಬಗಳು ಬೀದಿಪಾಲಾಗಿವೆ. ಈ ಸರ್ಕಾರದ ಅವಧಿಯಲ್ಲಿ ಹಲವಾರು ಘಟನೆಗಳು ನಡೆದಿವೆ. ಗುಡಿಗೆ ಬಂಗಾರದ ಕಳಸ ಇಟ್ಟಂತೆ ಅಂತ ನಾವು ಹೇಳುತ್ತೆವೆ. ಇಂತಹ ದುರ್ಘಟನೆಗೆ ಒಂದು ಕೆಟ್ಟದಾದ ಕಪ್ಪು ಚುಕ್ಕೆಕೆ ಸಿಎಂ ಸಿದ್ದರಾಮಯ್ಯ ಸರ್ಕಾರ ಕಾರಣವಾಗಿದೆ. ಸರ್ಕಾರವೇ ಹೊಣೆ ಹೊರಬೇಕು. ಆರ್.ಸಿ.ಬಿ ತಂಡಕ್ಕೆ ಅಪಾರ ಪ್ರಮಾಣದ ಜನ ಬೆಂಬಲ ಇದೆ.