ಚನ್ನರಾಯಪಟ್ಟಣ: ದಿಡಗದಿಂದ ಹಿರೀಸಾವೆ ವರೆಗೆ 1ಕೋಟಿ ರೂ. ವೆಚ್ಚದಲ್ಲಿ 4.2 ಕಿಮೀ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿ:ದಿಡಗದಲ್ಲಿ ಶಾಸಕ ಬಾಲಕೃಷ್ಣ
ಚನ್ನರಾಯಪಟ್ಟಣ: ದಿಡಗದಿಂದ ಹಿರೀಸಾವೆ ವರೆಗೆ 1ಕೋಟಿ ರೂ. ವೆಚ್ಚದಲ್ಲಿ 4.2 ಕಿಮೀ ಆಯ್ದ ಭಾಗಗಳಲ್ಲಿ ರಸ್ತೆ ಅಭಿವೃದ್ಧಿಗೊಳಿಸಲಾಗುವುದು ಎಂದು ಶಾಸಕ ಸಿ.ಎನ್ ಬಾಲಕೃಷ್ಣ ಹೇಳಿದರು. ತಾಲೂಕಿನ ದಿಡಗ ಗ್ರಾಮದಲ್ಲಿ ಪಿಡಬ್ಲ್ಯೂಡಿ ಇಲಾಖೆ ವತಿಯಿಂದ ಲೆಕ್ಕ ಶೀರ್ಷಿಕೆಯಡಿ 1 ಕೋಟಿ ರೂ ವೆಚ್ಚದ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.ದಿಡಗ ಗ್ರಾಮದ ಬಸ್ ನಿಲ್ದಾಣ ಅಭಿವೃದ್ಧಿಗೆ ಯೋಜನೆ ರೂಪಿಸಿದ್ದು ನೆಲಹಾಸಿಗೆ ಕಾಂಕ್ರೀಟ್, ನೆರಳು ಹಾಗೂ ಆಸನಗಳ ವ್ಯವಸ್ಥೆಯೊಂದಿಗೆ ಶೌಚಾಲಯ ನಿರ್ಮಾಣಕ್ಕೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾದ ಪುಟ್ಟರಾಜ್, ಎಂ.ಆರ್.ವಾಸು, ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ್ ಇತರರು ಇದ್ದರು.