ಚಿತ್ತಾಪುರ: ದೇವರು ಅನ್ನೋ ಭಯಭಕ್ತಿ ಇಲ್ಲದೆ ಯಲ್ಲಮ್ಮ ದಣೆವಿ ಕೈಗಳನ್ನೆ ಮುರಿದುಕೊಂಡು ಹೋದ ದುಷ್ಕರ್ಮಿಗಳು: ಕೊತ್ಲಾಪುರದಲ್ಲಿ ಘಟನೆ
ಚಿತ್ತಾಪುರ ಪಟ್ಟಣದ ಬಾಹರಪೇಟ್ ಸಮೀಪದ ಕೊತ್ಲಾಪೂರ ಯಲ್ಲಮ್ಮ ದೇವಸ್ಥಾನದಲ್ಲಿ ಕಳ್ಳರು ದೇವಿಯ ಬೆಳ್ಳಿ ಮೂರ್ತಿಯ ಎರಡು ಕೈಗಳನ್ನು ಕತ್ತರಿಸಿಕೊಂಡು ಹೋಗಿರುವ ಘಟನೆ ನಡೆದಿದೆ. ಮೂರ್ತಿಯನ್ನೇ ಕಳವು ಮಾಡಲು ಪ್ರಯತ್ನ ಮಾಡಿದ್ದಾರೆ. ಅದರೆ ಮೂರ್ತಿ ಬಾರದಿದ್ದಾಗ ಎರಡು ಕೈಗಳ್ಳನ್ನು ಕತ್ತರಿಸಿಕೊಂಡು ಪರಾಬೇಕಾಗಿದ್ದಾರೆ. ಅಷ್ಟಲ್ಲದೆ ದೇವಸ್ಥಾನದಲ್ಲಿದ್ದ ಬೆಳ್ಳಿಯ ಕಣ್ಣು, ಪಾದುಕೆ, ಪ್ಲೇಟ್ ಕೂಡಾ ಹೊತ್ತೊಯ್ದಿದ್ದಾರೆ. ಚಿತ್ತಾಪುರ ಪೊಲೀಸ್ ರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆಂದು ಬುಧವಾರ 8 ಗಂಟೆಗೆ ಮಾಹಿತಿ ಲಭ್ಯವಾಗಿದೆ. ಇನ್ನು ದೇಚರು ಅನ್ನೋ ಭಯಭಕ್ತಿ ಇಲ್ಲದೆ ದುಷ್ಕೃತ್ಯ ಎಸಗಿದವರ ಮೇಲೆ ಭಕ್ತರು ಹಿಡಿ ಶಾಪ ಹಾಕ್ತಿದ್ದಾರೆ...