ಎಸ್ಎಲ್ಎ ಕಾಯಿಲೆಯಿಂದ ಬಳಲುತ್ತಿದ್ದ ಮಗಳ ಚಿಕಿತ್ಸೆಗೆ ನೆರವು ಕೋರಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹಾಕಿದ್ದ ಮಹಿಳೆಗೆ ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. 3 ಲಕ್ಷ ರೂ ಹಣಕಾಸಿನ ನೆರವು ನೀಡುವುದಾಗಿ ಮಹಿಳೆಗೆ ಮಾರ್ಚ್ 26 ರಂದು 35 ಸಾವಿರದಾ 800 ರೂಪಾಯಿಗಳನ್ನು ವಂಚಿಸಿರುವ ಬಗ್ಗೆ ಹಾವೇರಿಯ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಾವೇರಿ ನಗರದ ಶ್ರೀಕಂಠಪ್ಪ ಬಡಾವಣೆಯ ನಿವಾಸಿ ಅನುಪಮಾ ಬಸವಣ್ಣೆಪ್ಪ ಕುಳೇನೂರ ಅವರ ಮಗಳಿಗೆ ಎಸ್ಎಲ್ಇ ಕಾಯಿಲೆಯಿದ್ದು, ಅದರ ಚಿಕಿತ್ಸೆಗೆ ಹಣದ ಸಹಾಯ ಕೋರಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಇದನ್ನು ನೋಡಿದ ವಂಚಕರು ದುಬೈಯಲ್ಲಿರುವ ಕನ್ನಡಿಗರು ವಿಡಿಯೋವನ್ನು ನೋಡಿ ಸುಮಾರು ರೂ.3 ಲಕ್ಷ ರೂಪಾಯಿಗಳ ಹಣವನ್ನು ಸಂಗ್ರಹ