ಮುಂಡಗೋಡ: ಮುಂಡಗೋಡ - ಅತ್ತಿವೇರಿ ನೂತನ ಬಸ್ ಸಂಚಾರಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ
ಮುಂಡಗೋಡ: ಪಟ್ಟಣ ಬಸ್ ನಿಲ್ದಾಣದ ಆವರಣದಲ್ಲಿ " ಮುಂಡಗೋಡ - ಅತ್ತಿವೇರಿ " ನೂತನ ಬಸ್ ಸಂಚಾರಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಸದಸ್ಯ ವಿವೇಕ್ ಹೆಬ್ಬಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಹಿರೇಹಳ್ಳಿ, ಕೆಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಚ್.ಎಮ್.ನಾಯ್ಕ, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಜ್ಞಾನೇಶ್ವರ ಗುಡಿಯಾಳ, ಪ್ರಮುಖರಾದ ಸಿದ್ಧಪ್ಪ ಹಡಪದ, ಕೆ.ಸಿ.ಗಲಭಿ ಸೇರಿದಂತೆ ಪ.ಪಂ ಸದಸ್ಯರು, ಪಕ್ಷದ ವಿವಿಧಸ್ಥರದ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.