ಚಾಮರಾಜನಗರ ತಾಲೂಕಿನ ನಂಜೇದೇವನಪುರದಲ್ಲಿ 5 ಹುಲಿ ಪ್ರತ್ಯಕ್ಷ ಸಂಬಂಧ ಒಂದೆಡೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಆದರೆ, ಹುಲಿ ಓಡಾಟ ಸಿಸಿಟಿವಿಯಲ್ಲಿ ಮತ್ತೇ ಸೆರೆಯಾಗಿದ್ದು ಜಮೀನಿನ ಸಮೀಪವೇ ಹೆಜ್ಜೆಗುರುತುಗಳು ಮೂಡಿವೆ. ಸೋಮವಾರ ಕರಿಕಲ್ಲು ಕ್ವಾರಿ ಸಮೀಪ 5 ಹುಲಿಗಳು ಬೀಡುಬಿಟ್ಟಿದ್ದು ಅರಣ್ಯ ಸಿಬ್ಬಂದಿಯ ಡ್ರೋನ್ ಕ್ಯಾಮರಾದಲ್ಲಿ ಸೆರೆಯಾಗಿತ್ತು. ರಾತ್ರಿ ರೈತ ಕುಮಾರಸ್ವಾಮಿ ಎಂಬವರ ಜಮೀನಿಗೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ತಾಯಿ ಹುಲಿ ಓಡಾಡಿರುವ ದೃಶ್ಯ ಸೆರೆಯಾಗಿದೆ. ಹುಲಿ ಸಂಚಾರದ ದೃಶ್ಯ ನೋಡಿ ಗ್ರಾಮಸ್ಥರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಸಿಸಿಟಿವಿ ದೃಶ್ಯ ಒಂದೆಡೆಯಾದರೇ ಜಮೀನುಗಳ ಸಮೀಪ ಹುಲಿ ಹೆಜ್ಜೆ ಗುರುತು ಸಹ ಮೂಡಿದೆ.