ಶೋರಾಪುರ: ಆಷಾಢ ಏಕಾದಶಿ ನಿಮಿತ್ಯ ನಗರದ ಪಾಂಡುರಂಗ ದೇವಸ್ಥಾನಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ
ಆಷಾಢ ಏಕಾದಶಿ ನಿಮಿತ್ಯ ಪಾಂಡುರಂಗ ದೇವಸ್ಥಾನಕ್ಕೆ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ಯಾದಗಿರಿ ಜಿಲ್ಲೆಯ ಸುರಪುರ ನಗರದ ಶ್ರೀ ಪಾಂಡುರಂಗ ದೇವಸ್ಥಾನಕ್ಕೆ ಸುರಪುರ ಮತಕ್ಷೇತ್ರದ ಶಾಸಕ ರಾಜಾ ವೇಣುಗೋಪಾಲ ನಾಯಕ ಭೇಟಿ ನೀಡಿದರು. ದೇವಸ್ಥಾನದಲ್ಲಿ ಆಷಾಡ ಏಕದಶಿ ವಿವಿಧ ಪೂಜಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು ನಂತರ ದೇವಸ್ಥಾನದ ಅರ್ಚಕರಿಂದ ಶಾಸಕರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು ಈ ಸಂದರ್ಭದಲ್ಲಿ ಶಾಸಕರ ಸಹೋದರ ರಾಜ ಸಂತೋಷ್ ನಾಯಕ್, ಹಾಗೂ ಭಕ್ತಾದಿಗಳು ಮುಖಂಡರು ಭಾಗವಹಿಸಿದ್ದರು