ತೀರ್ಥಹಳ್ಳಿಯ ಇತಿಹಾಸ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನಡೆಯುವ ಎಳ್ಳಮವಾಸ್ಯೆ ಜಾತ್ರಾ ಹಿನ್ನೆಲೆ ಬುಧವಾರ ರಾಮೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜಾರೋಹಣ ನೆರವೇರಿಸುವ ಮೂಲಕ ಎಳ್ಳಮವಾಸಿ ಜಾತ್ರೆಗೆ ಚಾಲನೆಯನ್ನು ನೀಡಲಾಯಿತು. ಬಳಿಕ ಮಾತನಾಡಿದ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ಅವರು ಪ್ರತಿ ವರ್ಷ ಲಕ್ಷಾಂತರ ಜನರು ಈ ಜಾತ್ರೆಗೆ ಹೊರ ಊರುಗಳಿಂದಲೂ ಆಗಮಿಸುತ್ತಾರೆ.ಮೂರು ದಿನಗಳ ಕಾಲ ಅಂದರೆ ಡಿಸೆಂಬರ್ 19 ರಂದು ತೀರ್ಥ ಸ್ನಾನ, ಡಿಸೆಂಬರ್ 20ರಂದು ರಥೋತ್ಸವ, ಡಿಸೆಂಬರ್ 21ರಂದು ತೆಪ್ಪೋತ್ಸವ ಹಾಗೂ ಈ ಬಾರಿ ಏಳು ದಿನಗಳ ಕಾಲ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದರು.