ಬೇಲೂರು: ಪಟ್ಟಣದ ಪ್ರಮುಖ ರಸ್ತೆಯಲ್ಲಿ ಬಾಯಿ ತೆರೆದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಮ್ಯಾನ್ ಹೋಲ್#localissue
Belur, Hassan | Oct 4, 2025 ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಮೂಡಿಗೆರೆಗೆ ಹಾದುಹೋಗುವ ದಾರಿ ಮಧ್ಯದಲ್ಲಿ ಬೇಲೂರು ಪುರಸಭೆಗೆ ಸೇರಿದ ಒಳಚರಂಡಿಯ ಹಲವು ಕಡೆ ಗುಂಡಿಗಳು ಬಾಯಿ ತೆರೆದು ನಿಂತಿವೆ . ಬೇಲೂರಿನ ಶ್ರೀ ಚನ್ನಕೇಶವ ದೇವಾಲಯದ ಶಿಲ್ಪ ಕಲೆಗಳ ಸೌಂದರ್ಯ ಸವಿಯಲು ದಿನನಿತ್ಯ ಸಾವಿರಾರು ಭಕ್ತಾದಿಗಳು ಹಾಗೂ ಸಾರ್ವಜನಿಕರು ವಿದ್ಯಾರ್ಥಿಗಳ. ಬರುವುದು ಸರ್ವೇಸಾಮಾನ್ಯ . ಈ ಮಾರ್ಗದಲ್ಲಿ ಬೇಲೂರಿನ ಪ್ರತಿಷ್ಠಿತ ಮೌಂಟ್ ಕಾರ್ಮೆಲ್ ಶಾಲೆ ಪೂರ್ಣಪ್ರಜ್ಞ ಶಾಲೆ ಎಸ್ ಇ ಎಸ್ ಶಾಲೆಯ ಸಾವಿರಾರು ಮಕ್ಕಳು ಸಂಚರಿಸುವ ರಸ್ತೆಯಾಗಿದೆ . ಈ ರಸ್ತೆಗೆ ಯಾವುದೇ ರೀತಿಯ ಬೀದಿ ದೀಪಗಳು ಇಲ್ಲದೆ ರಾತ್ರಿ ಸಮಯದಲ್ಲಿ ಸಾರ್ವಜನಿಕರು ತಿರುಗಾಡುವುದು ಕಷ್ಟವಾಗಿದೆ ಬಹು ಮುಖ್ಯವಾಗಿ ರಾಷ್ಟ್ರೀಯ ಹೆದ್ದಾರಿ ಇದಾಗಿದೆ.