ಆಲಮೇಲ ತಾಲ್ಲೂಕಿನ ಗಬಸಾವಳಗಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ಗಬಸಾವಳಗಿ, ಬಿಸನಾಳ ಗ್ರಾಮಗಳನ್ನು ಸಿಂದಗಿ ತಾಲ್ಲೂಕಿಗೆ ಸೇರಿಸುವಂತೆ ಅನಿರ್ಧಿಷ್ಟಾವಧಿ ಉಪವಾಸ ಸತ್ಯಾಹ ಕೈಗೊಳ್ಳಲಾಯಿತು. ಪ್ರತಿಭಟನೆಗೆ ಬೆಂಬಲಿಸಿ ಗುತ್ತಿಬಸವಣ್ಣ ಏತ ನೀರಾವರಿ ರೈತ ಹಿತರಕ್ಷಣಾ ಸಮಿತಿ ರಾಂಪೂರ ಪಿ.ಎ ಅಧ್ಯಕ್ಷ ಚಂದ್ರಶೇಖರ್ ದೇವರೆಡ್ಡಿ ಮಾತನಾಡಿದರು.