ಹುಬ್ಬಳ್ಳಿ: ವರ್ಗಾವಣೆ ವಿಚಾರವಾಗಿ ರೈಲ್ವೆ ನೌಕರರೊಬ್ಬರಿಗೆ ಮೂವರು ಸೇರಿ ಲೋಹದ ವಸ್ತುವಿನಿಂದ ಮುಖ, ಬಲ ತಲೆ, ಕುತ್ತಿಗೆಗೆ ಚುಚ್ಚಿ ಗಾಯ ಮಾಡಿರುವ ಘಟನೆ ಇಲ್ಲಿಯ ಕೇಶ್ವಾಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಿಥಿಲೇಶ ಕುಮಾರ ಹಲ್ಲೆಗೆ ಒಳಗಾದವರು. ಮಿಥಿಲೇಶ ಕುಮಾರ ಅವರು ಹುಬ್ಬಳ್ಳಿ ರೈಲ್ವೆಯಲ್ಲಿ ಟೆಕ್ನಿಷಿಯನ್ ಗ್ರೇಡ್ 1ರಲ್ಲಿ ಕೆಲಸ ಮಾಡುತ್ತಿದ್ದು, ನ. 18ರಂದು ಕರ್ತವ್ಯ ಮುಗಿಸಿ ಹೊರಡುತ್ತಿದ್ದಾಗ ಸಿದ್ಧಾರ್ಥ ಪಾಂಡೆ, ಪ್ರೇಮಕುಮಾರ, ಅಭಿಷೇಕ ಎಂಬುವವರು ಕರೆ ಮಾಡಿ, ಗೇಟ್ ಬಳಿ ಕಾಯುವಂತೆ ಹೇಳಿದ್ದಾರೆ. ವರ್ಗಾವಣೆ ವಿಷಯವಾಗಿ ಮಿಥಿಲೇಶ ಕುಮಾರ ಅವರಿಗೆ ಕೇಳಿದ್ದಾರೆ. ಆಗ ಮಿಥಿಲೇಶ, ನನಗೆ ಎನ್ಒಸಿ ಸಿಕ್ಕಿಲ್ಲ. ಒಂದು ವೇಳೆ ಸಿಕ್ಕರೆ ಬೇರೆಡೆ ಹೋಗುತ್ತೇನೆ. ನೀವು ಹೋಗಿ ಕ್ಲಾರ್ಕ್ ಹತ್ತಿರ ಕೇಳಿ ಎಂ