ಶಿವಮೊಗ್ಗ: ಹೊಸಮನೆ ಬಡಾವಣೆಯಲ್ಲಿ ಪೊಲೀಸ್ ಚೌಕಿ ನಿರ್ಮಿಸುವಂತೆ ನಗರದಲ್ಲಿ ಗೃಹ ಸಚಿವರಿಗೆ ಪಾಲಿಕೆ ಮಾಜಿ ವಿಪಕ್ಷ ನಾಯಕಿ ರೇಖಾ ರಂಗನಾಥ್ ಮನವಿ
ಹೊಸಮನೆ ಬಡಾವಣೆಯಲ್ಲಿ ಕಾನೂನು ಸುವ್ಯವಸ್ಥೆಗೆ ದೃಷ್ಟಿಯಿಂದ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ಶಿವಮೊಗ್ಗ ಮಹಾನಗರ ಪಾಲಿಕೆಯ ಮಾಜಿ ವಿಪಕ್ಷ ನಾಯಕಿ ರೇಖಾ ರಂಗನಾಥ್ ಮನವಿ ಸಲ್ಲಿಸಿದರು. ಹೊಸಮನೆ ಬಡಾವಣೆ ಮತ್ತು ಶರಾವತಿ ನಗರ ಬಡಾವಣೆಗಳಲ್ಲಿ 26 ಸಾವಿರ ಜನಸಂಖ್ಯೆ ಇದೆ. ಇವೆರಡು ಬಡಾವಣೆಗಳ ಮಧ್ಯೆ ಪೊಲೀಸ್ ಚೌಕಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು. ಸ್ಥಳೀಯ ಜನರಿಗೆ ಅನುಕೂಲವಾಗಲು ಹೊಸಮನೆ ಬಡಾವಣೆ ಬಳಿಯ ಚಾನೆಲ್ ಏರಿಯಾ ಮೇಲ್ಭಾಗದಲ್ಲಿ ಸಾಗರ ರಸ್ತೆಯಿಂದ ನೂರು ಅಡಿ ರಸ್ತೆ, ರಾಜೇಂದ್ರ ನಗರದ ವರೆಗೆ ಹಾದುಹೋಗುವ ಸರ್ವಿಸ್ ರಸ್ತೆಯಲ್ಲಿ ನಾಗಪ್ಪ ದೇವಸ್ಥಾನ ಹಾಗೂ ಮಲೆ ಮಾದೇಶ್ವರ ದೇವಸ್ಥಾನದ ಸಮೀಪ ಸರ್ಕಾರಿ ಜಾಗವಿದ್ದು ಅಲ್ಲಿ ಪೊಲೀಸ್ ಸೋಕಿ ನಿರ್ಮಿಸಬೇಕೆಂದು ಮನವಿ ಮಾಡಿದರು.