ಬೆಂಗಳೂರು ಉತ್ತರ: ಅಕ್ರಮ ಗಣಿಗಾರಿಕೆ ಸಬ್ ಕಮಿಟಿ ಅಧ್ಯಕ್ಷರನ್ನಾಗಿ ಸಚಿವ ಹೆಚ್.ಕೆ ಪಾಟೀಲ್ ನೇಮಕ: ನಗರದಲ್ಲಿ ಸಚಿವ ಪರಮೇಶ್ವರ್
ಅಕ್ರಮ ಗಣಿಗಾರಿಕೆ ಸಂಬಂಧ ಕ್ಯಾಬಿನೆಟ್ ಸಬ್ ಕಮಿಟಿ ರಚನೆ ವಿಚಾರಕ್ಕೆ ಸಂಬಂಧಿಸಿ ಭಾನುವಾರ ಮಧ್ಯಾಹ್ನ 12:30 ರ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪರಮೇಶ್ವರ್ ಅವರು, ಈ ಬಗ್ಗೆ ಹೆಚ್ ಕೆ ಪಾಟೀಲರು ಮುಖ್ಯಮಂತ್ರಿ ಅವರ ಗಮನಕ್ಕೆ ತಂದಿದ್ರು, ಪತ್ರ ಕೂಡ ಬರೆದಿದ್ರು. ಹಿಂದೆ ಅವರೇ ಕ್ಯಾಬಿನೆಟ್ ಸಬ್ ಕಮಿಟಿ ಅಧ್ಯಕ್ಷರಿದ್ರು. ಹೀಗಾಗಿ ಅದನ್ನ ಲಾಜಿಕಲ್ ಎಂಡ್‌ಗೆ ತೆಗೆದುಕೊಂಡು ಹೋಗಿ, ಅದಕ್ಕೆ ಸಲಹೆ ಕೊಡಿ ಅಂತಾ ಅವರನ್ನೇ ಕ್ಯಾಬಿನೆಟ್ ಸಬ್ ಕಮಿಟಿ ಅಧ್ಯಕ್ಷರಾಗಿ ಮಾಡಿದ್ದಾರೆ. ಸಾವಿರಾರು ಕೋಟಿಯಷ್ಟು ಅಕ್ರಮ ಇದೆ ಅಂತಾ ಹೇಳಿದಾರೆ. ಹೀಗಾಗಿ ಅವರನ್ನೇ ಸಬ್ ಕಮಿಟಿ ಅಧ್ಯಕ್ಷರನ್ನಾಗಿ ಮಾಡಿದಾರೆ. ಅದರಲ್ಲೇ ರೆಕವರಿ ಮಾಡೋದು ಕೂಡ ಒಂದು ಭಾಗ . ಹೆಚ್ ಕೆ ಪಾಟೀಲರು ಸಭೆಗೆ ಕರೆದಾಗ ಹೋಗ್ತೇವೆ