ಹುಬ್ಬಳ್ಳಿ: ಕ್ಷುಲ್ಲಕ ವಿಚಾರಕ್ಕೆ ಯುವಕನಿಗೆ ಚಾಕು ಇರಿದ ಘಟನೆ ನಡೆದಿದೆ. ನಗರದ ಯಲ್ಲಾಪುರ ಓಣಿಯ ಅಫ್ತಾಬ್ ಎಂಬ ಯುವಕನಿಗೆ ನಾಲೈದು ಜನರ ಗುಂಪೊಂದು ಚಾಕು ಇರಿದು ಪರಾರಿಯಾಗಿದ್ದಾರೆ.ಯಲ್ಲಾಪುರ ಓಣಿಯ ಬುಡ್ಡು ಪಾನ್ ಶಾಪ್ ಬಳಿ ಈ ಘಟನೆ ನಡೆದಿದ್ದು, ಹಳೆಯ ವೈಷಮ್ಯವೇ ಈ ಘಟನೆಗೆ ಕಾರಣ ಎಂದು ಶಂಕಿಸಲಾಗಿದೆ. ಕಳೆದ ಮಧ್ಯ ರಾತ್ರಿ ಅಫ್ತಾಬ್ ನ ಮನೆಗೆ ಆಗಮಿಸಿದ್ದ ಜೈಯದ್, ತೋಹೀದ್, ಚೋರ್ ಫಾರೂಕ್ ಸೇರಿದಂತೆ ಐದು ಜನ ದುಷ್ಕರ್ಮಿಗಳು ಅಫ್ತಾಬ್ ನಿಗೆ ಬೆದರಿಕೆ ಹಾಕಿದ್ದಾರೆ. ಅಲ್ಲೇ ಬೆದರಿಕೆ ಹಿನ್ನೆಲೆ ಇಂದು ಅಫ್ತಾಬ್ ಹಾಗೂ ಆತನ ಕುಟುಂಬಸ್ಥರು ಬೆಂಡಿಗೇರಿ ಪೊಲೀಸ್ ಠಾಣೆಗೆ ದೂರು ನೀಡಲು ಹೋಗಿದ್ದಾರೆ.ದೂರು ನೀಡಿ ಸಂಜೆ ಮನೆಗೆ ವಾಪಸ್ ತೆರಳುವ ಸಂದರ್ಭಅಫ್ತಾಬ್ ನನ್ನ ಅಡ್ಡಗಟ್ಟಿ ಆತನ ಸೊಂಟಕ್ಕೆ, ಬೆನ್ನಿಗೆ ಹಾ