ತಳಕು ಗ್ರಾಮದಲ್ಲಿ ಸರಣಿ ಕಳ್ಳತನ ಯತ್ನ ನಡೆದಿದೆ. ಗ್ರಾಮದ ಸರ್ಕಲ್ ನಲ್ಲಿರುವ ಅಂಗಡಿ ಮುಂಗಟ್ಟುಗಳಿಗೆ ತಡರಾತ್ರಿ ಕಳ್ಳ ನೋರ್ವ ಎಂಟ್ರಿಕೊಟ್ಟಿದ್ದಾನೆ. ಒಬ್ಬನೇ ಒಬ್ಬ ಕಳ್ಳ ಎಂಟ್ರಿ ಕೊಟ್ಟಿದ್ದು ಹಾರೇ ಹಿಡಿದು ಬೀಗ ಎಗರಿಸಿ, ಕಳ್ಳತನಕ್ಕೆ ಯತ್ನಿಸಿದ್ದಾನೆ. ಗ್ರಾಮದ ಹೊಸಹಳ್ಳಿ ರಸ್ತೆಯಲ್ಲಿರುವ ಕೆಲ ಅಂಗಡಿಗಳಿಗೆ ಬೀಗ ಮುರಿದು ಎಂಟ್ರಿ ಕೊಟ್ಟಿದ್ದಾನೆ. ಹಾರೇ ಹಿಡಿದು ಓಡಾಡುತ್ತಿರುವ ಕಳ್ಳನ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ತಳಕು ಸಿಪಿಐ ಹನುಮಂತಪ್ಪ, ಪಿಎಸ್ಐ ಶಿವಕುಮಾರ್ ಹಾಗೂ ಬೆರಳಚ್ಚು ಸಿಬ್ಬಂದಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.