ಶಿಡ್ಲಘಟ್ಟ: ಕೆರೆ,ಕುಂಟೆ,ಬಾವಿ,ಕೃಷಿ ಹೊಂಡಗಳ ಬಳಿ ಜನತೆ ಎಚ್ಚರಿಕೆಯಿಂದ ಇರಬೇಕು- ನಗರದಲ್ಲಿ ಶಾಸಕ ರವಿಕುಮಾರ್ ಮನವಿ
ಶಿಡ್ಲಘಟ್ಟ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದಲ್ಲಿ ತಂದೆ ಮಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಕ್ಷೇತ್ರದ ಶಾಸಕ ರವಿಕುಮಾರ್ ಕೆರೆ,ಕುಂಟೆ,ಬಾವಿ,ಕೃಷಿಹೊಂಡಗಳ ಬಳಿ ಸಾಕಷ್ಟು ಜಾಗೃತಿಯಿಂದ ಇರುವಂತೆ ಸೂಚನೆ ಕೊಟ್ಟಿದ್ದಾರೆ. ಇಂದು ಈಜು ಕಲಿಸಲು ಮುಂದಾದ ವೇಳೆ ತಂದೆ ಮಗಳು ಕೆರೆಯಲ್ಲಿ ಸಾವನ್ನಪ್ಪಿದ್ದು ಸಾಕಷ್ಟು ನೋವು ತಂದಿದೆ. ಆದರಿಂದ ಯಾರು ಸಹಾ ಕೆರೆ,ಕುಂಟೆ ಕೃಷಿ ಹೊಂಡಗಳ ಬಳಿ ಅನಾವಶ್ಯಕವಾಗಿ ಹೋಗದಂತೆ ಶಿಡ್ಲಘಟ್ಟ ಕ್ಷೇತ್ರದ ಶಾಸಕ ಬಿಎನ್ ರವಿಕುಮಾರ್ ಮನವಿ ಮಾಡಿಕೊಂಡರು.