ಹುಣಸೂರು: ಅಪ್ರಾಪ್ತ ಬಾಲಕಿ ಗರ್ಭುಣಿ: ಹುಣಸೂರಿನಲ್ಲಿ ಪೋಕ್ಸೋ ಪ್ರಕರಣ ದಾಖಲು
Hunsur, Mysuru | Sep 17, 2025 ಆರೋಗ್ಯ ಪರೀಕ್ಷೆಗೆಂದು ತೆರಳಿದ್ದ ಅಪ್ರಾಪ್ತ ಬಾಲಕಿಯೊಬ್ಬಳು ಗರ್ಭಿಣಿಯಾಗಿದ್ದಳು ಎಂಬ ಅಂಶ ಬೆಳಕಿಗೆ ಬಂದಿದೆ. ಹುಣಸೂರು ತಾಲೂಕಿನ ಹನಗೋಡು ಹೋಬಳಿಯಲ್ಲಿ ಸೆ.17ರಂದು ಅಪ್ರಾಪ್ತ ಬಾಲಕಿ ವಿವಾಹಿತೆಯಾಗಿರುವುದು ತಿಳಿದುಬಂದಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರ ಬಳಿ ಆರೋಗ್ಯ ಪರೀಕ್ಷೆಗೆಂದು ಹೋಗಿದ್ದ ವೇಳೆ ಬಾಲಕಿಯನ್ನು ಪರೀಕ್ಷಿಸಿದ ವೈದ್ಯರು ಗರ್ಭಿಣಿಯಾಗಿರುವುದಾಗಿ ಖಾತ್ರಿಪಡಿಸಿದ್ದಾರೆ. ಸರಕಾರದ ನಿಯಮದಂತೆ ತಾಯಿ ಕಾರ್ಡ್ ನೀಡುವ ಸಲುವಾಗಿ ವೈದ್ಯರು ಬಾಲಕಿಯ ವಯಸ್ಸು ಖಾತ್ರಿ ಪಡಿಸಿಕೊಳ್ಳಲು ಆಧಾರ್ ಕಾರ್ಡ್ ಅಥವಾ ಶಾಲಾ ದಾಖಲಾತಿಯನ್ನು ನೀಡುವಂತೆ ತಿಳಿಸಿದ್ದರು. ಈ ದಾಖಲಾತಿಗಳಿಂದ ಬಾಲಕಿ ಅಪ್ರಾಪ್ತ ಎಂದು ಕಂಡು ಬಂದ ಹಿನ್ನಲೆ ಗ್ರಾಮಾಂತರ ಠಾಣೆಯಲ್ಲಿ ಪೋಕ್ಸೋ ಕಾಯಿದೆಯಡಿ ದೂರು ದಾಖಲಿಸಿದ್ದಾರೆ.