ಹುಬ್ಬಳ್ಳಿ: ಕಸಾಯಿಖಾನೆಗೆ ಸಾಗಾಟ ಮಾಡುತ್ತಿದ್ದ ಹೋರಿಕರ ಮತ್ತು ಒಂದು ಆಕಳು ಕರವನ್ನು ರಕ್ಷಣೆ ಮಾಡಿರುವ ಪೊಲೀಸರು, ಮೂವರು ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಧಾರವಾಡದ ಮೈನುದ್ದೀನ ಗೋಡೆವಾಲೆ, ಫಿರೋಜ್ ಬೇಪಾರಿ, ಇಮ್ರಾನ್ ಬೇಪಾರಿ ಎಂಬುವರ ವಿರುದ್ಧ ಪ್ರಕರಣ ದಾಖಲಾಗಿದೆ. ಶರೆವಾಡ-ಬೆಟದೂರ ರಸ್ತೆಯ ಛಬ್ಬಿ ಗ್ರಾಮದ ಹತ್ತಿರ ಗೂಡ್ಸ್ ವಾಹನದಲ್ಲಿ ಸಾಗಿಸುತ್ತಿದ್ದಾಗ ದಾಳಿ ಮಾಡಿ ಹೋರಿಕರ ಮತ್ತು ಆಕಳುಕರುವನ್ನು ರಕ್ಷಣೆ ಮಾಡಿದ್ದಾರೆ. ವಾಹನ ಸೇರಿ ೧,೧೮ ಲಕ್ಷ ಮೌಲ್ಯದ ವಸ್ತು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. --