ಗೌರಿಬಿದನೂರು: ಲೋಕಾಯುಕ್ತರ ಬಲೆಗೆ ಸರ್ವೇ ಅಧಿಕಾರಿ ಹರೀಶ್ ರೆಡ್ಡಿ
ಗೌರಿಬಿದನೂರು ತಾಲ್ಲೂಕಿನ ಸರ್ವೆಯರ್ ಹರೀಶ್ ರೆಡ್ಡಿ ಅವರು ಜಮೀನು ಅಳತೆ ಮಾಡಲು 25 ಸಾವಿರ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಸಂಬಂಧ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, 20 ಸಾವಿರ ರೂಪಾಯಿ ಸ್ವೀಕರಿಸುವ ವೇಳೆ ಅವರನ್ನು ರೆಡ್ ಹ್ಯಾಂಡ್ ಆಗಿ ವಶಕ್ಕೆ ಪಡೆದಿದ್ದಾರೆ. ಈ ಹಿಂದೆ 3 ಸಾವಿರ ರೂಪಾಯಿ ಮುಂಗಡವಾಗಿ ಪಡೆದುಕೊಂಡಿದ್ದ ಸರ್ವೆಯರ್, ಉಳಿದ ಹಣ ಪಡೆಯುವ ಸಂದರ್ಭದಲ್ಲಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.