ಆನೇಕಲ್: ವರದಕ್ಷಿಣೆ ಕಿರುಕುಳದ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಮಹಿಳೆ! ಆನೇಕಲ್ ಅಲ್ಲಿ ಕರುಳು ಹಿಂಡುವ ಕ್ರೌರ್ಯದ ಕಥೆ
ಸೆಪ್ಟೆಂಬರ್ 29 ಆನೇಕಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ವರದಕ್ಷಿಣೆ ಕಿರುಕುಳದ ಬಗ್ಗೆ ಇಂಚಿಂಚಾಗಿ ಬಿಚ್ಚಿಟ್ಟಿದ್ದಾರೆ. ತವರು ಮನೆಗೆ ಹೋಗಿ ವಾಪಸ್ ಬಂದಾಗ ಅರುಣ್ & ಕುಟುಂಬಸ್ಥರು ಮನೆ ಸೇರಿಸಿ ಕೊಂಡಿಲ್ಲ. ಈ ವೇಳೆ ತನ್ನ ಮಗುವನ್ನು ಕೊಡಿ ಅಂದಾಗ ಇಡೀ ಕುಟುಂಬಸ್ಥರು ರಸ್ತೆಯಲ್ಲಿ ನಿಲ್ಲಿಸಿ ಜುಟ್ಟು ಹಿಡಿದು ಹೊಡೆದಿದ್ದಾರೆ. ದುಡ್ಡು ಕಳ್ಳತನ ಮಾಡಿದ್ದಾಳೆ ಅಂತ ಪಕ್ಕದ ಮನೆಯವರ ಬಳಿ ಹೇಳಿ ಮತ್ತೊಂದಿಷ್ಟು ಹೊಡೆದಿದ್ದಾರೆ ಸದ್ಯ ವರದಕ್ಷಿಣೆಗೆ ಕ್ರೌರ್ಯ ಮೆರೆದಿದ್ದಾರೆ ಅಂತ ಆರೋಪಿಸಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲು ಮಾಡಿದ್ದಾರೆ