ಬೆಂಗಳೂರು ಉತ್ತರ: ಬಿಬಿಎಂಪಿ ಇ-ಖಾತಾ ಯೋಜನೆಗೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ
ವಿಶಾಖಪಟ್ಟಣಂದಲ್ಲಿ ಸೆಪ್ಟೆಂಬರ್ 22ರಂದು ನಡೆದ ಭಾರತ ಸರ್ಕಾರದ 28ನೇ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಸಮಾರಂಭದಲ್ಲಿ ಬಿಬಿಎಂಪಿಯ ಇ-ಖಾತಾ ಯೋಜನೆಗೆ ರಾಷ್ಟ್ರೀಯ ಇ-ಆಡಳಿತ ಪ್ರಶಸ್ತಿ ಲಭಿಸಿದೆ..ಈ ಕುರಿತು ಸೆಪ್ಟೆಂಬರ್ 22ರಂದು ಬೆಳಿಗ್ಗೆ 11 ಗಂಟೆಗೆ ಮಾಹಿತಿ ಹಂಚಿಕೊಳ್ಳಲಾಯಿತು. ಪ್ರಶಸ್ತಿಯನ್ನು ಮಾನ್ಯ ಸಚಿವರು, ಪ್ರಧಾನ ಮಂತ್ರಿ ಕಾರ್ಯಾಲಯದ ರಾಜ್ಯ ಸಚಿವರಾದ ಜಿತೇಂದ್ರ ಸಿಂಗ್ ಅವರಿಂದ ಪ್ರದಾನ ಮಾಡಲಾಯಿತು. ಇದೇ ವೇಳೆ ಇ-ಆಡಳಿತ ಪ್ರಶಸ್ತಿ ಜೊತೆಗೆ 10 ಲಕ್ಷ ರೂ. ನಗದು ಬಹುಮಾನ ಕೂಡಾ ನೀಡಲಾಯಿತು.