ಯಲ್ಲಾಪುರ: ಅರಣ್ಯವಾಸಿಗಳ ಪಾದಯಾತ್ರೆ ಸಂಭAದಿಸಿ ಪೂರ್ವ ಬಾವಿ ಸಭೆ ಯಲ್ಲಾಪುರ ತಾಲೂಕಿನ ವೆಂಕಟರಮಣ ದೇವಾಲಯದ ಸಭಾಂಗಣದಲ್ಲಿ ನವೆಂಬರ ೨೩, ಮುಂಜಾನೆ ೧೦ ಗಂಟೆಗೆ ಸಂಘಟಿಸಲು ತೀಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದರು. ಅರಣ್ಯವಾಸಿಗಳಲ್ಲಿ ಕಾನೂನು ಜಾಗೃತ ಮೂಡಿಸುವ ಉದ್ದೇಶದಿಂದ ಡಿ.೩ ರಿಂದ ೬ ರರವರೆಗೆ ಮುರಡೇಶ್ವರದಿಂದ ಕಾರವಾರದವರೆಗೆ ಜರುಗುವ ಪಾದಯಾತ್ರೆಯಲ್ಲಿ ಅರಣ್ಯವಾಸಿಗಳ ಜವಬ್ದಾರಿ ಮತ್ತು ಪಾಲ್ಗೋಳ್ಳುವ ಕುರಿತು ಸಭೆಯಲ್ಲಿ ತೀರ್ಮಾನಿಸಲಾಗುವುದು ಎಂದು ಅವರು ತಿಳಿಸಿದ್ದಾರೆ