ವಾಡಿ ಪಟ್ಟಣದಲ್ಲಿ ಕೇಂದ್ರ ಬಸ್ ನಿಲ್ದಾಣ, ಸರ್ಕಾರಿ ಪದವಿಪೂರ್ವ ಕಾಲೇಜು, ಗ್ರಂಥಾಲಯ ಸೇರಿದಂತೆ ವಿವಿಧ ಬೇಡಿಕೆಗಳಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಲಾಯಿತು. ಮಂಗಳವಾರ 2 ಗಂಟೆ ಸುಮಾರಿಗೆ ನಡೆದ ಪ್ರತಿಭಟನೆಯಲ್ಲಿ ಜನಧ್ವನಿ ಜಾಗೃತ ಸಮಿತಿ ಮುಖಂಡ ಮಹ್ಮದ್ ಇಸ್ಯೂಫ್ ಸಾಬ್ ಮುಲ್ಲಾ ಕಮರವಾಡಿ ಪಾಲ್ಗೊಂಡು ಮಾತನಾಡಿದರು.