ಸಿಂದಗಿ: ಸಿಂದಗಿ: ಬ್ಯಾಕೋಡದಲ್ಲಿ ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯದಲ್ಲಿ ಧರ್ಮಸಭೆ ಜರುಗಿತು.
ತಾಲೂಕಿನ ಬ್ಯಾಕೋಡದಲ್ಲಿ ರವಿವಾರ ಮಧ್ಯಾಹ್ನ 12 ಗಂಟೆಗೆ ಶ್ರೀಶೈಲ ಜಗದ್ಗುರು ಡಾ.ಚೆನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯರು ಸಾನಿಧ್ಯದಲ್ಲಿ ಧರ್ಮಸಭೆ ಜರುಗಿತು. ಸಿಂದಗಿಯ ಸಾರಂಗಮಠ-ಗಚ್ಚಿನಮಠದ ಶ್ರೀ ಡಾ|ಪ್ರಭುಸಾರಂಗದೇವ ಶಿವಾಚಾರ್ಯರು ಸಮ್ಮುಖ ವಹಿಸಿದ್ದರು. ಕನ್ನೊಳ್ಳಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಕೊಣ್ಣೂರ-ಜಮಖಂಡಿಯ ಡಾ|ವಿಶ್ವಪ್ರಭು ಶಿವಾಚಾರ್ಯರು, ಕೆರೂರದ ಡಾ|ಶಿವಕುಮಾರ ಶಿವಾಚಾರ್ಯರು, ಕೂಡಲಗಿಯ ಶ್ರೀ ಪ್ರಶಾಂತಸಾಗರ ಶಿವಾಚಾರ್ಯರು, ಯಂಕಂಚಿಯ ಶ್ರೀ ಅಭಿನವರುದ್ರಮುನಿ ಶಿವಾಚಾರ್ಯರು, ಮಳ್ಳಿಯ ಶ್ರೀ ಸಿದ್ಧಲಿಂಗ ಶಿವಾಚಾರ್ಯರು, ಕೊಕಟನೂರದ ಶ್ರೀ ಮಡಿವಾಳೇಶ್ವರ ಮಹಾಸ್ವಾಮಿಗಳು, ಶ್ರೀ ಶಿವಬಸವ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಶಾಸಕ ಅಶೋಕ ಮನಗೂಳಿ ಉದ್ಘಾಟಿಸುವರು. ಭಕ್ತರು ಭಾಗವಹಿಸಿದ್ದರು.