ಕಲಬುರಗಿ: ಮದುವೆಗೆಂದು ಬಂದು ಚಿನ್ನ ಕಳೆದುಕೊಂಡ ಮಹಿಳೆ: ನಗರದ ವಿವಿ ಠಾಣೆಯಲ್ಲಿ ಪ್ರಕರಣ ದಾಖಲು
ಆಟೋದಲ್ಲಿ ಸಂಚರಿಸುವಾಗ ಮಹಿಳೆಯೊಬ್ಬರ ಬ್ಯಾಗಿನಲ್ಲಿದ್ದ 1.25 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವಾದ ಘಟನೆ ನಡೆದಿದೆ. ವಿಜಯಪುರದ ಶಹನಾಜ್ ಬೇಗಂ ಚಿನ್ನ ಕಳೆದುಕೊಂಡಿದ್ದಾರೆ. ಸಂಬಂಧಿಕರ ಮದುವೆಗೆಂದು ವಿಜಯಪುರದಿಂದ ಕಲಬುರಗಿಗೆ ಬಂದು, ರಾಮ ಮಂದಿರ ಸರ್ಕಲ್ ಹತ್ತಿರ ಅಟೋದಲ್ಲಿ ಸೇಡಂ ರಿಂಗ್ ರಸ್ತೆಗೆ ಪ್ರಯಾಣ ಬೆಳೆಸಿದ್ದಾರೆ. ಈ ವೇಳೆ ಇಬ್ಬರು ಅಪರಿಚಿತ ಮಹಿಳೆಯರು ಆಟೋ ಹತ್ತಿ ಇವರಿಗೆ ಅರಿವಿಲ್ಲದಂತೆ ಕೃತ್ಯ ಎಸಗಿದ್ದಾರೆಂದು ತಿಳಿದುಬಂದಿದೆ. ಬ್ಯಾಗನಲ್ಲಿದ್ದ 15 ಗ್ರಾಂ. ಚಿನ್ನದ ನೆಕ್ಲೆಸ್, ತಲಾ 5 ಗ್ರಾಂ ತೂಕದ ಚಿನ್ನದ 2 ಸುತ್ತುಂಗುರು ಕಳವಾಗಿದೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ತನಿಖೆ ನಡೆದಿದೆ ಎಂದು ಸೋಮವಾರ 5 ಗಂಟೆಗೆ ಪೊಲೀಸರು ತಿಳಿಸಿದ್ದಾರೆ.