ಚನ್ನಗಿರಿ: ಕುಡಿಯುವ ನೀರಿಗಾಗಿ ಜೋಳದಾಳ್ ಗ್ರಾ.ಪಂ.ನಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು
ಸಮರ್ಪಕವಾಗಿ ನೀರು ಒದಗಿಸುವಂತೆ ಚನ್ನಗಿರಿ ತಾಲ್ಲೂಕಿನ ಜೋಳದಾಳ ಗ್ರಾಮಸ್ಥರು ಗ್ರಾಮ ಪಂಚಾಯಿತಿಯಲ್ಲಿ ಚನ್ನಗಿರಿ ಇಒ ಉತ್ತಮ್, ಎಇಇ ಲೋಹಿತ್ ಅವರನ್ನು ತರಾಟೆಗೆ ತೆಗೆದುಕೊಂಡರು. 12 ದಿನಗಳಿಗೊಮ್ಮೆ ನೀರನ್ನು ಒದಗಿಸುತ್ತೀರಿ, 12 ದಿನಕ್ಕೊಮ್ಮೆ ನೀರು ಕೊಟ್ಟರು ಅದನ್ನು ಕೇವಲ ಅರ್ಧ ಗಂಟೆ ಕೊಡುತ್ತೀರಿ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಮರ್ಪಕವಾಗಿ ನೀರು ಒದಗಿಸದಿದ್ದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.