ಹೊಸನಗರ: ರಿಪ್ಪನ್ ಪೇಟೆಯ ಚಿಪ್ಪಿಗರ ಕೆರೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕೆರೆಗೆ ಉರುಳಿ ಬಿದ್ದ ಕಾರು, ಓರ್ವ ಮಹಿಳೆ ಸಾವು
ಚಾಲಕನ ನಿಯಂತ್ರಣ ತಪ್ಪಿದ ಕಾರು ಕೆರೆಗೆ ಉರುಳಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಕಾರಿನಲ್ಲಿದ್ದ ಇನ್ನಿಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ. ಹೊಸನಗರ ತಾಲೂಕಿನ ರಿಪ್ಪನ್ಪೇಟೆಯ ಚಿಪ್ಪಿಗರ ಕೆರೆಗೆ ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಕಾರು ಉರುಳಿದೆ. ಕಾರಿನಲ್ಲಿದ್ದ ತ್ಯಾಗರ್ತಿಯ ಪಾರ್ವತಮ್ಮ (65) ಮೃತಪಟ್ಟಿದ್ದಾರೆ. ಕಾರಿನಲ್ಲಿದ್ದ ಓರ್ವ ಯುವಕ ಮತ್ತು ಯುವತಿಯನ್ನು ರಕ್ಷಿಸಲಾಗಿದೆ. ಕಾರಿನಲ್ಲಿದ್ದವರು ಅಮ್ಮನಘಟ್ಟದಿಂದ ತ್ಯಾಗರ್ತಿಗೆ ಮರಳುತ್ತಿದ್ದರು ಎಂದು ತಿಳಿದು ಬಂದಿದೆ. ಚಿಪ್ಪಗರ ಕೆರೆ ಬಳಿ ನಿಯಂತ್ರಣ ತಪ್ಪಿ ಕಾರು ಕೆರೆಗೆ ಉರುಳಿದೆ. ಸ್ಥಳೀಯರಾದ ಗಿರೀಶ್ , ಇಮ್ರಾನ್ ಹಾಗೂ ಮುತ್ತಲೀಬ್ ಜೀವದ ಹಂಗು ತೊರೆದು ಕಾರಿನಲ್ಲಿದ್ದ ಇಬ್ಬರನ್ನು ರಕ್ಷಿಸಿದ್ದಾರೆ.