ಯಲ್ಲಾಪುರ: ಮನಸ್ಸಿನಿಂದ ಮಾಡುವ ಕಾಯಕಲ್ಪವೇ ಸಂಕಲ್ಪವಾಗಿದ್ದು ,ಯಕ್ಷಗಾನ ಕಲಾವಿದರು ಮತ್ತು ವೀಕ್ಷಕರ ಮನೆಗಳಲ್ಲಿ ಸಂಸ್ಕಾರ ಸಂಸ್ಕೃತಿ ತನ್ನಿಂದ ತಾನೆ ನೆಲೆಗೊಂಡಿರುತ್ತದೆ. ಎಂದು ಬಾರಕೂರ ಮಹಾ ಸಂಸ್ಥಾನದ ವಿದ್ಯಾವಾಚಸ್ಪತಿ ಡಾ.ವಿಶ್ವಸಂತೋಷ ಭಾರತೀ ಶ್ರೀಪಾದರು ನುಡಿದರು. ಅವರು ಪಟ್ಟಣದ ಗಾಂಧೀ ಕುಟೀರದಲ್ಲಿ ಎರಡನೇ ದಿನದ ಸಂಕಲ್ಪೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿ ಆಶೀರ್ವಚನ ನೀಡಿದರು.ವೇದಿಕೆಯಲ್ಲಿ ಎಂ.ಎಲ್.ಸಿ ಶಾಂತಾರಾಮ ಸಿದ್ದಿ, ವಿಶ್ವದರ್ಶನ ಸಂಸ್ಥೆ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ,ಪಹರೆ ವೇದಿಕೆ ಅಧ್ಯಕ್ಷ ನಾಗರಾಜ ನಾಯಕ,ಇತರರು ಇದ್ದರು.