ಸರಗೂರು ತಾಲ್ಲೂಕಿನ ಆದಿಶಕ್ತಿ ದೇವತೆ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವವು ಮಂಗಳವಾರ ಬೆಳಿಗ್ಗೆಯಿಂದ ಸಂಜೆವರೆಗೆ ವಿಜೃಂಭಣೆಯಿಂದ ಹಾಲುಗಡದಲ್ಲಿ ನಡೆಯಿತು.ಯುಗಾದಿ ಹಬ್ಬದ ಅಂಗವಾಗಿ ತಾಯಿ ಚಿಕ್ಕದೇವಮ್ಮ ಅವರಿಗೆ ಬೆಳಗಿನ ಜಾವ 4ಗಂಟೆಯಿಂದ ವಿಶೇಷವಾಗಿ ಪೂಜೆ ಸಲ್ಲಿಸುವುದರ ಮೂಲಕ, ಚಿಕ್ಕದೇವಮ್ಮ ಬೆಟ್ಟದಿಂದ ಅಮ್ಮನವರ ಉತ್ಸವ ಮೂರ್ತಿಯನ್ನು, ಮಂಗಳವಾದ್ಯ ವೀರಗಾಸೆ, ವಿವಿಧ ಕಲಾತಂಡಗಳೊಂದಿಗೆ, ಕಪಿಲಾ ನದಿಯ ಹಾಲುಗಡ, ಜಪದಕಟ್ಟೆಯಲ್ಲಿ ಸ್ಥಾಪಿಸಿ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು.