ಕಲಬುರಗಿ: ಪಾರ್ಟಿಗೆ ಹುಡುಗರನ್ನ ಕರಿಸಬೇಡ ಅಂದಿದಕ್ಕೆ ಮಾರಕಾಸ್ತ್ರಗಳಿಂದ ತಾಯಿ-ಮಗನ ಮೇಲೆ ದಾಳಿ: ಧರ್ಮಾಪುರನಲ್ಲಿ ಘಟನೆ
ಕಲಬುರಗಿಯ ಧರ್ಮಾಪೂರದಲ್ಲಿ ಪಾರ್ಟಿ ವಿವಾದಕ್ಕೆ ಸಂಬಂಧಿಸಿದಂತೆ ತಾಯಿಮಗನ ಮೇಲೆ ಕೊಡಲಿ ಮತ್ತು ಚಾಕುದಿಂದ ಹಲ್ಲೆಗೈದ ಘಟನೆ ನಡೆದಿದೆ. ಡ್ರೈವರ್ ನಾಗರಾಜ ಜಾಪೂರ (27) ಹಾಗೂ ಆತನ ತಾಯಿ ನಿಲಮ್ಮ ಜಾಪೂರ ಹಲ್ಲೆಗೆ ಒಳಗಾಗಿದ್ದು ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜಶೇಖರ ನಾಟಿಕರ್ ಮತ್ತು ಆತನ ಪುತ್ರ ರಾಮು ದಾಳಿ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ನಾಗರಾಜ ಮನೆಯ ಪಕ್ಕದಲ್ಲಿ ಆರೋಪಿ ರಾಜಶೇಖರನ ಸಹೋಧರಿ ಮನೆ ಕಟ್ಟುತ್ತಿದ್ದು, ಅಲ್ಲಿ ರಾಜಶೇಖರ ಹುಡುಗರನ್ನ ಕರೆಸಿ ಪಾರ್ಟಿ ಮಾಡುತ್ತಿದ್ದರಂತೆ. ಮನೆಯಲ್ಲಿ ಹೆಣ್ಣು ಮಕ್ಕಳು ಇದ್ದಾರೆ ಹುಡುಗರನ್ನ ಕರಿಸಬೇಡ ಎಂದಿದಕ್ಕೆ ಮಾತಿಗೆ ಮಾತು ಬೆಳೆದು ಕೊಡಲಿ ಹಾಗೂ ಚಾಕುದಿಂದ ಹಲ್ಲೆ ಮಾಡಿದ್ದಾರೆಂದು ವಿಶ್ವವಿದ್ಯಾಲಯ ಠಾಣೆ