ಬಳ್ಳಾರಿ: ಬೇರೆ ಉದ್ದಿಮೆಗೆ ಭೂಮಿ ಸಂಸದ ಇ ತುಕಾರಾಂ ಗೆ ಕುಡುತಿನಿ ಭೂ ಸಂತ್ರಸ್ತರು ತೀವ್ರ ತರಾಟೆ
ಕೈಗಾರಿಕೆಗಾಗಿ ವಶಪಡಿಸಿಕೊಂಡಿರುವ ಭೂಮಿಯಲ್ಲಿ ಜೆಎಸ್‌ಡಬ್ಲ್ಯುಗೆ ನೀಡಿರುವುದನ್ನು ವಿರೋಧಿಸಿ, ಭೂಮಿ ಹಿಂದಿರುಗಿಸುವಂತೆ ಒತ್ತಾಯಿಸಿ ಪ್ರತಿಭಟನೆ ತೀವ್ರಗೊಳಿಸಿರುವ ಕುಡುತಿನಿ ಭೂ ಸಂತ್ರಸ್ತ ರೈತರನ್ನು ಸಂಸದ ಇ.ತುಕಾರಾಂ ಮಂಗಳವಾರ ಸಂಜೆ6ಗಂಟೆಗೆ ಭೇಟಿಯಾದರು. ಈ ವೇಳೆ ಹೋರಾಟಗಾರರೊಂದಿಗೆ ತುಕಾರಾಂ ವಾಗ್ವಾದಕ್ಕೆ ಇಳಿದರು. ‘ಈ ಸಮಸ್ಯೆ ಸೃಷ್ಟಿಮಾಡಿದ್ದು ಜನಾರ್ದನ ರೆಡ್ಡಿ, ಹೋಗಿ ಅವರ ಬಳಿ ಇದನ್ನು ಹೇಳು’ ಎಂದು ರೈತರೊಬ್ಬರನ್ನು ಗದರಿದರು. ಇದಕ್ಕೆ ಆಕ್ರೋಶಗೊಂಡ ಹೋರಾಟಗಾರರು ತುಕಾರಾಂ ವಿರುದ್ಧ ತಿರುಗಿಬಿದ್ದ ಘಟನೆ ನಡೆಯಿತು. ಕುಡುತಿನಿ ಭೂಸಂತ್ರಸ್ತರ ಬೇಡಿಕೆಗಳ ಕುರಿತುಬುಧವಾರ ಬೆಳಿಗ್ಗೆ 11ಗಂಟೆಗೆ ಮಾಧ್ಯಮಗಳೊಂದಿಗೆ ತುಕಾರಾಂ ಮಾತನಾಡಿದ್ದಾರೆ. ಬ್ರಹ್ಮಿಣಿ’ಯನ್ನು ಬೇರೆ ಕಂಪನಿಯಲ್ಲಿ ವಿಲೀನಗೊಳಿಸಿ ಜನಾರ್ದನ