ಧಾರವಾಡ: ಕರ್ನಾಟಕ ವಿಶ್ವವಿದ್ಯಾಲಯದಲ್ಲಿ 22 ವರ್ಷ 9 ತಿಂಗಳ ವರಗೆ ಕುಲಪತಿ ಮತ್ತು ಕುಲಸಚಿವರಿಗೆ ಕಾರ ಚಾಲಕನಾಗಿ ಕಾರ್ಯ ನಿರ್ವಹಿಸಿದ ರುದ್ರಪ್ಪನಿಗೆ ಇಂದು ಕೆಲಸದ ಕೊನೆಯ ದಿನವಾಗಿತ್ತು. ಶನಿವಾರದಂದು ಮಧ್ಯಾಹ್ನ 3:00 ಗಂಟಗೆ ರುದ್ರಪ್ಪನಿಗೆ ಕೆಲಸದ ಕೊನೆಯ ದಿನವಾಗಿತ್ತು. ಈ ಸಂದರ್ಭದಲ್ಲಿ ನಿವೃತ್ತಿಯಾದ ರುದ್ರಪ್ಪನಿಗೆ ಪರೀಕ್ಷಾಂಗ ಕುಲಸಚಿವರಾದ ಡಾ.ನಿಜಲಿಂಗಪ್ಪ ಮಟ್ಟಿಹಾಳ ಅವರು ಕಾರು ಚಾಲನೆ ಮಾಡುವ ಮೂಲಕ ರುದ್ರಪ್ಪನ ಮೆನೆಯವರೂ ಬಿಟ್ಟು ಬಂದ ಅಪರೂಪದ ಘಟನೆ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ನಡೆಯಿತು. ಕುಲಸಚಿವ ರಜನೀಶ್ ಗೋಯಲ್ ಅವರ ಅಧಿಕಾರ ಅವಧಿಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡ ರುದ್ರಪ್ಪ ಅವರು ಕರ್ನಾಟಕ ವಿಶ್ವವಿದ್ಯಾಲಯ ಕುಲಪತಿಗಳಾಗಿದ ಡಾ.ಪಠಾಣ, ಡಾ.ಖಾಜಾಪೀರ, ಡಾ.ಎಸ್.ಕೆ.ಸೈದಾಪೂರ ಮತ್ತು ಡಾ.ಹ