ಕಲಬುರಗಿ: ನಗರದಲ್ಲಿ ದೀಪಾವಳಿ ಹಬ್ಬದ ಸಡಗರ, ಸಂಭ್ರಮ ಖರೀದಿ ಜೋರು
ನಾಡಿನಾದ್ಯಂತ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಕಲಬುರಗಿಯಲ್ಲೂ ಹಬ್ಬದ ಸಂಭ್ರಮ ಜೋರಾಗಿದ್ದು, ನಗರದ ಸೂಪರ್ ಮಾರ್ಕೆಟ್ಗಳು ಜನಜಂಗುಳಿಯಿಂದ ತುಂಬಿವೆ. ಹಬ್ಬದ ಖರೀದಿಗಾಗಿ ಜನರು ಮುಗಿಬಿದ್ದಿದ್ದಾರೆ. ಹೂವು, ಹಣ್ಣು ಸೇರಿದಂತೆ ಪೂಜಾ ಸಾಮಗ್ರಿಗಳ ಬೆಲೆ ಏರಿಕೆ ನಡುವೆಯೂ ಸೂಪರ್ ಮಾರ್ಕೆಟ್ಗಳಲ್ಲಿ ಖರೀದಿ ಭರಾಟೆ ಜೋರಾಗಿದೆ. ಸೋಮವಾರ 4 ಗಂಟೆಗೆ ಈ ದೃಶ್ಯ ಕಂಡುಬಂದಿದೆ..