ಯಲ್ಲಾಪುರ:ಮಹಿಳೆಗೆ ವಾಟ್ಸಪ್ಪ ನಲ್ಲಿ ಅಶ್ಲೀಲ ಮೆಸೇಜ್ ಕಳುಹಿಸಿದ್ದರಿಂದ ಪಟ್ಟಣ ಪಂಚಾಯತ್ ಸದಸ್ಯ ಸೋಮೇಶ್ವರ್ ನಾಯ್ಕ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರವೀಂದ್ರ ನಗರದ ಪ ಪಂ ಸದಸ್ಯ ಸೋಮೇಶ್ವರ ( ಸೋಮು ನಾಯ್ಕ್) ಈತನು ತನ್ನ ಮೊಬೈಲ್ ನಿಂದ ತನಗೆ ವಾಟ್ಸಪ್ಪ್ ಮೂಲಕ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಆರೋಪಿಸಿ ನೊಂದ ಮಹಿಳೆ ದೂರು ನೀಡಿದ್ದು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಸದರಿ ಆರೋಪಿತನ ವಿರುದ್ಧ ಅಪರಾಧ ಸಂಖ್ಯೆ 264/2025 ಕಲಂ 75 BNS ಹಾಗೂ 67 IT ಆಕ್ಟ್ ಅಡಿ ಪ್ರಕರಣ ದಾಖಲಾಗಿಲಿಸಿ ತನಿಖೆ ಕೈ ಗೊಂಡಿದ್ದಾರೆ.