ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿ ಬೀಗ ಒಡೆದು ಒಳ ನುಗ್ಗಿ ಲಕ್ಷಾಂತರ ಹಣ ದೋಚಿದ ಘಟನೆ ಸಂಬಂಧ ದೂರುದಾರನೇ ಕೃತ್ಯ ಎಸಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೂಡುಗೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಬಾಗಿಲು ಒಡೆದು 14 ಲಕ್ಷ 12 ಸಾವಿರ ರೂ. ಕಳ್ಳತನ ಸಂಬಂಧ ಮೂಡುಗೂರು ಕೃಷಿ ಸಂಘದ ಮುಖ್ಯ ಕಾರ್ಯ ನಿವಾರ್ಹಕ ಅಧಿಕಾರಿ ಚಂದ್ರಶೇಖರ್ ತೆರಕಣಾಂಬಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದಾಗ ಚಂದ್ರಶೇಖರ್ ಕೃತ್ಯ ಎಸಗಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.