ಗೃಹ ಲಕ್ಷ್ಮೀ ಹಣ ದುರುಪಯೋಗ ಆಗಿಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು. ಅಧಿಕಾರಿಗಳ ಲೋಪದಿಂದ ಎರಡು ತಿಂಗಳು ಹಣ ಜಮೆಯಾಗಿಲ್ಲ, ಶೀಘ್ರದಲ್ಲೇ ಜಮೆ ಮಾಡಲಾಗುವುದು. ಬಿಜೆಪಿಯವರು ಮೊದಲು ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಲಿ ಎಂದು ಹೇಳಿದರು. ಗುರುವಾರ ಸುವರ್ಣ ವಿಧಾನಸೌಧದಲ್ಲಿ ಪ್ರತಿಕ್ರಿಯೆ ನೀಡಿದ ಅವರು. ಗೃಹ ಲಕ್ಷ್ಮೀ ಯೋಜನೆಯ ಹಣ ದುರುಪಯೋಗವಾಗಿಲ್ಲ. ಬಿಜೆಪಿಯವರ ಆರೋಪದಲ್ಲಿ ಹುರುಳಿಲ್ಲ. ಹಣ ಎಲ್ಲ ಮಹಿಳೆಯರ ಖಾತೆಗೆ ಹಾಕಲಾಗಿದೆ. ಎಂದು ಹೇಳಿದರು