ದಾವಣಗೆರೆ: ರಾಮಗೋಂಡನಹಳ್ಳಿಯಲ್ಲಿ ಆಕಸ್ಮಿಕ ವಿದ್ಯುತ್ ತಗುಲಿ ವ್ಯಕ್ತಿ ಮೃತ, ನಗರದಲ್ಲಿ ಮೃತ ದೇಹ ಪರಿಶೀಲಿಸಿದ ಶಾಸಕ ಕೆ ಎಸ್ ಬಸವಂತಪ್ಪ
ದಾವಣಗೆರೆ ತಾಲೂಕಿನ ರಾಮಗೋಂಡನಹಳ್ಳಿ ಗ್ರಾಮದ ಹೊಲದಲ್ಲಿ ಕೆಲಸ ಮಾಡುವಾಗ ವ್ಯಕ್ತಿ ಓರ್ವನಿಗೆ ಆಕಸ್ಮಿಕ ವಿದ್ಯುತ್ ತಗುಲಿ ಮೃತ ಪಟ್ಟಿದ್ದಾರೆ. ಹರೀಶ ,ವಿದ್ಯುತ್ ತಗುಲಿ ಮೃತ ಪಟ್ಟ ದುರ್ದೈವಿ, ಹರೀಶ ಮೃತ ದೇಹವನ್ನು ದಾವಣಗೆರೆ ನಗರದ ಎಸ್ ಎಸ್ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿ ಇರಿಸಲಾಗಿದ್ದು. ಸ್ಥಳಕ್ಕೆ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ ಎಸ್ ಬಸವಂತಪ್ಪ, ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂಬಂಧ ಪ್ರಕರಣ ಕೂಡ ದಾಖಲಾಗಿದೆ.