ಹುಮ್ನಾಬಾದ್: ಸಮಾಜ ಒಡೆಯುವ ದುಷ್ಟ ರಾಜಕಾರಣಿಗಳಿಂದ ಜನರು ಎಚ್ಚರಿಕೆಯಿಂದಿರಬೇಕು : ಧುಮ್ಮನ್ಸೂರಿನಲ್ಲಿ ಶಾಸಕ ಡಾ. ಸಿದ್ದು ಪಾಟೀಲ್ ಮನವಿ
ಸಮಾಜ ಒಡೆಯುವ ದುಷ್ಟ ರಾಜಕಾರಣಿಗಳಿಂದ ಎಲ್ಲ ಸಮುದಾಯದವರು ಎಚ್ಚರಿಕೆಯಿಂದ ಇರಬೇಕು ಎಂದು ಶಾಸಕ ಡಾ. ಸಿದ್ದು ಪಾಟೀಲ್ ಅವರು ಮನವಿ ಮಾಡಿದರು. ತಾಲೂಕಿನ ಧುಮ್ಮನಸೂರನಲ್ಲಿ ಸೋಮವಾರ ಮಧ್ಯಾಹ್ನ 2:30ಕ್ಕೆ ನಡೆದ ರೇವಪ್ಪಯ್ಯ ಮುತ್ಯಾ ದೇವಸ್ಥಾನ ಕಾರ್ಯಕ್ರಮದ ವೇದಿಕೆಯಲ್ಲಿ ಮಾತನಾಡಿ, ಮೊದಲು ಸಮಾಜ ನಂತರ ರಾಜಕೀಯ ಪಕ್ಷ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.