ಶಿವಮೊಗ್ಗ: ಅರ್ಹ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ, ಶಿವಮೊಗ್ಗದಲ್ಲಿ ಮಾನವ ಹಕ್ಕುಗಳ ಹೋರಾಟ ಸಮಿತಿ ಆಧ್ಯಕ್ಷ ರಾಜು
ಭದ್ರಾವತಿ ತಾಲೂಕು ಬಿಳಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನವುಲೇ ಬಸಾಪುರ ಗ್ರಾಮದ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಒತ್ತಾಯಿಸಿ ಡಿಸಿ ಕಚೇರಿ ಮುಂದೆ ನಡೆಸುತ್ತಿರುವ ಧರಣಿ ಸತ್ಯಾಗ್ರಹವನ್ನು ಗಂಭೀರವಾಗಿ ಪರಿಗಣಿಸದ ಜಿಲ್ಲಾಡಳಿತದ ನಿಲರ್ಕ್ಷ್ಯದ ಧೋರಣೆ ಖಂಡಿಸಿ, ನ. 24 ರಿಂದ ಉಪವಾಸ ಸತ್ಯಾಗ್ರಹ ಆರಂಭಿಸುವುದಾಗಿ ಮಾನವ ಹಕ್ಕುಗಳ ಹೋರಾಟ ಸಮಿತಿ ಎಚ್ಚರಿಸಿದೆ. ಶನಿವಾರ ಸಂಜೆ 5 ಗಂಟೆಗೆ ಸುದ್ದಿಗೋಷ್ಠಿಯಲ್ಲಿ ಸಮಿತಿ ಆಧ್ಯಕ್ಷ ಬಿ. ಎಲ್.ರಾಜು ಮಾತನಾಡಿ, ನವಲೇ ಬಸಾಪುರ ಗ್ರಾಮದ ಸರ್ವೇ ನಂಬರ್ 999 ರಲ್ಲಿ 5 ಎಕರೆ 35 ಗುಂಟೆ ಗ್ರಾಮ ಠಾಣ ಜಾಗವಿದ್ದು, ಅಲ್ಲಿ ಅರ್ಹ ಬಡವರಿಗೆ ನಿವೇಶನ ನೀಡುವಂತೆ ಅಲ್ಲಿನ ಬಡವರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬಂದಿದೆ.