ಜೇವರ್ಗಿ: ಇಜೇರಿ ಗ್ರಾಮದ ಬಳಿ ಘನಘೋರ ದುರಂತ: ಬಾಲಕಿ ಮೇಲೆ ಹರಿದ ಗೂಡ್ಸ್ ವಾಹನ, ಬಾಲಕಿ ಕಾಲ್ ಕಟ್
ಕಲಬುರಗಿ : ರಸ್ತೆ ದಾಟುತ್ತಿದ್ದ ಬಾಲಕಿ ಮೇಲೆ ಗೂಡ್ಸ್ ವಾಹನ ಹರಿದು ಬಾಲಕಿ ಕಾಲ್ ಕಟ್ ಆದ ಘನಘೋರ ದುರಂತ ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ಇಜೇರಿ ಗ್ರಾಮದ ಬಳಿ ನಡೆದಿದ್ದು, ನವೆಂಬರ್ 27 ರಂದು ಬೆಳಗ್ಗೆ 11 ಗಂಟೆಗೆ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.. 3 ನೇ ತರಗತಿ ಓದುತ್ತಿದ್ದ 9 ವರ್ಷದ ಬಾಲಕಿ ಲಕ್ಷ್ಮೀ ಸಗರ್, ಶಾಲೆ ಬಳಿಯಿಂದ ರಸ್ತೆಯಾಚೆ ಇರೋ ಹ್ಯಾಂಡ್ಪಂಪ್ಗೆ ನೀರು ಕುಡಿಯಲು ಹೋಗಿದ್ದ ವೇಳೆ ಗೂಡ್ಸ್ ವಾಹನ ಡಿಕ್ಕಿಯಾಗಿ ಬಾಲಕಿಯ ಒಂದು ಕಾಲು ಛಿದ್ರಛಿದ್ರಗೊಂಡಿದೆ.. ಬಾಲಕಿಯ ನರಳಾಟ ಕರುಳು ಕಿತ್ತು ಬರವಂತಿದ್ದು, ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು