ಆಲೂರು: ಹಳೆ ಅಲೂರಿನ ಮನೆಯೊಂದರಲ್ಲಿ ಅನುಮಾನಾಸ್ಪದ ಭಾರಿ ಸ್ಫೋಟ: ಇಬ್ಬರು ದಂಪತಿಗಳಿಗೆ ಗಂಭೀರ ಗಾಯ
Alur, Hassan | Sep 30, 2025 ಆಲೂರು : ಪಟ್ಟಣದ ಹಳೇ ಆಲೂರಿನ ಮನೆಯೊಂದರಲ್ಲಿ ಅನುಮಾನಾಸ್ಪದ ಸ್ಫೋಟ ನಡೆದು ಮನೆಯಲ್ಲಿದ್ದ ದಂಪತಿಗಳು ಹಾಗೂ ಒಂದು ವರ್ಷದ ಮಗು ತೀವ್ರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಮನೆಯ ಮಾಲೀಕ ಮೋಹನ್ ರವರ ಮಗ ಸುದರ್ಶನ್ ಆಚಾರ್ (40), ಕಾವ್ಯ (28) ಗಾಯ ಗೊಂಡಿದ್ದು, ಸ್ಫೋಟದಿಂದ ಮನೆಯ ಭಾಗಶಃ ಹಾನಿಗೊಳಗಾಗಿದ್ದು, ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕ ಉಂಟಾಗಿದೆ. ಆಲೂರು ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸಕಲೇಶಪುರ ಉಪವಿಭಾಗದ ಡಿ.ವೈ.ಎಸ್.ಪಿ ಪ್ರಮೋದ್ ಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ನಿಖರ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ವಿವಿಧ ಕೋಣಗಳಿಂದ ತನಿಖೆ ಮುಂದುವರೆಸಿದ್ದಾರೆ.