ಸಿರವಾರ: ಹೀರೆಹಣಗಿ ಗ್ರಾಮದಲ್ಲಿ ರಂಗೋಲಿ ಬಿಡಿಸುವ ಮೂಲಕ ಮತದಾನ ಕುರಿತು ಜಾಗೃತಿ
Sirwar, Raichur | Mar 29, 2024 ಹೀರೆಹಣಗಿ ಗ್ರಾಮದಲ್ಲಿ ಸಿರವಾರ ತಾಲ್ಲೂಕು ಸ್ವೀಪ್ ಸಮಿತಿಯಿಂದ ಲೋಕಸಭೆ ಸಾರ್ವತ್ರಿಕ ಚುನಾವಣೆ-2024ರ ಮತದಾನ ಕುರಿತು ಜಾಗೃತಿ ಮೂಡಿಸುವ ಅಭಿಯಾನ ಹಮ್ಮಿಕೊಳ್ಳಲಾಯಿತು. ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ ಸ್ವಸಹಾಯ ಗುಂಪಿನ ಸದಸ್ಯರು ರಂಗೋಲಿ ಬಿಡಿಸುವ ಮೂಲಕ ಜನರಲ್ಲಿ ಮತದಾನ ಕುರಿತು ಜಾಗೃತಿ ಮೂಡಿಸಲಾಯಿತು. ಮೇ.7ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೇ ಮತ ಚಲಾಯಿಸುವುದಾಗಿ ಪ್ರತಿಜ್ಞಾವಿಧಿ ಬೋಧನೆ ಮಾಡಲಾಯಿತು. ನಾನು ತಪ್ಪದೇ ಮತ ಚಲಾಯಿಸುತ್ತೇನೆ ಎಂಬ ಸಹಿ ಅಭಿಯಾನ ಮಾಡಲಾಯಿತು.