ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗ್ರಾಮದಲ್ಲಿ ನಾಯಿ ಕಡಿತದಿಂದ ಮೃತಪಟ್ಟ ಕೋತಿಗೆ ಹಿರಿಕಾಟಿ ಗ್ರಾಮದ ಯುವಕರು ಮಾನವೀಯ ಅಂತ್ಯಸಂಸ್ಕಾರ ನೆರವೇರಿಸಿ, ತಿಥಿ ಕಾರ್ಯ ಮಾಡಿ ಅನ್ನ ಸಂತರ್ಪಣೆ ಮಾಡಿದ ವಿಶೇಷ ಘಟನೆ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಹಿರಿಕಾಟಿ ಗೇಟ್ ಸಮೀಪ ನಾಯಿ ಕಡಿತಕ್ಕೆ ಒಳಗಾಗಿ ಮೃತಪಟ್ಟ ಕೋತಿಯೊಂದಕ್ಕೆ ಗ್ರಾಮದ ಯುವಕರು ಮಾನವೀಯತೆ ಮತ್ತು ಸಾಮಾಜಿಕ ಜವಾಬ್ದಾರಿಯಿಂದ ಕೋತಿಯ ಮೃತದೇಹವನ್ನು ಗೌರವಪೂರ್ವಕವಾಗಿ ಮಣ್ಣು ಮಾಡಿ, ಹಾಲು–ತುಪ್ಪ ಕಾರ್ಯ, 11ನೇ ದಿನದ ತಿಥಿ ಕಾರ್ಯಗಳನ್ನು ನೆರವೇರಿಸಿ, ನಂತರ ಸಾರ್ವಜನಿಕ ಅನ್ನ ಸಂತರ್ಪಣೆಯನ್ನೂ ಇಂದು ನಡೆಸಿದರು.