ಚಳ್ಳಕೆರೆ: ಆಯುಧ ಪೂಜಾ ಹಿನ್ನಲೆ ನಗರದಲ್ಲಿ ಹೂವು, ಹಣ್ಣು ಖರೀದಿಗೆ ಮುಗಿಬಿದ್ದ ಜನ
ಆಯುಧ ಪೂಜೆ ಹಿನ್ನಲೆ ನಗರದಲ್ಲಿ ಬುಧವಾರ ಬೆಳ್ಳಂ ಬೆಳಿಗ್ಗೆ ನಗರದ ಜನರು ಹೂ, ಹಣ್ಣು ಸೇರಿದಂತೆ ಪೂಜಾ ಸಾಮಾಗ್ರಿಗಳು ಖರೀದಿಗೆ ಮುಗಿಬಿದ್ದಿದ್ದರು.. ನಗರದ ಬೆಂಗಳೂರು ರಸ್ತೆಯಲ್ಲಿ ಸೇವಂತಿ, ಚೆಂಡು ಹೂವು ಮಾರಾಟ ಮಾಡಿದರೆ, ಚಿತ್ರದುರ್ಗ ರಸ್ತೆಯಲ್ಲಿ ಹಣ್ಣು, ಬೂದು ಕುಂಬಳ ಕಾಯಿ ಮಾರಾಟ ಮಾಡಿದರೆ, ಪಾವಗಡ ರಸ್ತೆ ಬದಿಯಲ್ಲಿ ಬಾಳೆ ಕಂದು ವ್ಯಾಪಾರ ಭರ್ಜರಿಯಾಗಿ ನಡೆಯಿತು. ಇನ್ನೂ ಪಾವಗಡ ರಸ್ತೆಯಲ್ಲಿ ಮಲ್ಲಿಗೆ ಹೂವು,ಹೂವಿನ ಹಾರಗಳ ವ್ಯಾಪರ ಮಾಡುತ್ತಿರುವುದು ವಿಶೇಷವಾಗಿ ಕಂಡು ಬಂತು.