ಬಳ್ಳಾರಿ: ಕಾಂಗ್ರೆಸ್ ಜನಪ್ರತಿನಿಧಿಗಳ ಮೇಲೆ ಇಡಿ ದಾಳಿ ಖಂಡನೀಯ ; ನಗರದಲ್ಲಿ ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್ ಹುಸೇನ್
ಕಳೆದ 11 ವರ್ಷಗಳಲ್ಲಿ 193 ಇಡಿ (ಜಾರಿ ನಿರ್ದೇಶನಾಲಯ) ದಾಳಿಗಳು ನಡೆದಿದ್ದು, ಎರಡದಲ್ಲಿ ಮಾತ್ರ ಶಿಕ್ಷೆಯಾಗಿದ್ದು ಒಟ್ಟು ಪ್ರಕರಣಗಳಲ್ಲಿ ಶೇ. 98 ರಷ್ಟು ವಿರೋಧ ಪಕ್ಷಗಳನ್ನೇ ಗುರಿ ಮಾಡಿಕೊಂಡು ತನಿಖೆ ನಡೆಸಿರುವ ಇಡಿ, ಐಟಿ, ಸಿಬಿಐ ಸೇರಿ ವಿವಿಧ ಏಜೆನ್ಸಿಗಳನ್ನು ಕೇಂದ್ರ ಸರ್ಕಾರ ಮತ್ತು ಬಿಜೆಪಿ ದುರ್ಬಳಕೆ ಮಾಡಿಕೊಂಡು ರಾಜಕೀಯ ಪ್ರತೀಕಾರವನ್ನು ತೋರುತ್ತಿದೆ ಎಂದು ರಾಜ್ಯಸಭಾ ಸದಸ್ಯ ಡಾ.ಸಯ್ಯದ್ ನಾಸಿರ್ ಹುಸೇನ್ ಅವರು ಆರೋಪಿಸಿದ್ದಾರೆ. ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಬಳ್ಳಾರಿ ಸಂಸದ ಇ. ತುಕಾರಾಂ, ಶಾಸಕರಾದ ಡಾ. ಎನ್.ಟಿ. ಶ್ರೀನಿವಾಸ್, ಜೆ.ಎನ್. ಗಣೇಶ್, ನಾರಾ ಭರತರೆಡ್ಡಿ ಮತ್ತು ಬಿ. ನಾಗೇಂದ್ರ ಅವರ ಮೇಲೆ ಬೆದರಿಕೆ ತಂತ್ರವನ್ನು ಬಿಜೆಪಿ ಬಳಸುತ್ತಿದೆ ಎಂದ್ರು...