ಸರಗೂರು: ಇಟ್ನಾ ಗ್ರಾಮಕ್ಕೆ ಬಂದಿದ್ದ ಚಿಕ್ಕದೇವಮ್ಮನ ಉತ್ಸವ ಮೂರ್ತಿ ಮರಳಿ ಚಿಕ್ಕದೇವಮ್ಮ ಬೆಟ್ಟಕ್ಕೆ; ಇಟ್ನಾ ಗ್ರಾಮಸ್ಥರಿಂದ ಅದ್ದೂರಿ ಬೀಳ್ಕೊಡುಗೆ
ಸರಗೂರು ತಾಲ್ಲೂಕಿನ ಆದಿಶಕ್ತಿ ದೇವತೆ ಚಿಕ್ಕದೇವಮ್ಮ ಜಾತ್ರಾ ಮಹೋತ್ಸವವು ಬುಧವಾರ ಇಟ್ನಾ ಗ್ರಾಮದಲ್ಲಿ ವಿಜೃಂಭಣೆಯಿಂದ ನಡೆಯಿತು. ಯುಗಾದಿ ದಿನ ಚಿಕ್ಕದೇವಮ್ಮನ ಬೆಟ್ಟದಿಂದ ಉತ್ಸವ ಮೂರ್ತಿಯು ಹಾಲುಗಡಕ್ಕೆ ಕರೆತಂದು ಒಂದು ದಿನದ ಜಾತ್ರೆಯನ್ನು ನಡೆಸಲಾಗಿದ್ದು, ನಂತರ ಬುಧವಾರ ಹಾಲುಗಡದಿಂದ ಇಟ್ನಾ ಗ್ರಾಮಕ್ಕೆ ಉತ್ಸವ ಮೂರ್ತಿಯನ್ನು ಕೊಂಡೊಯ್ದು ಅಲ್ಲಿಯೂ ಒಂದು ದಿನದ ಜಾತ್ರೆಯನ್ನ ಮಾಡಲಾಗಿತ್ತು. ಬಳಿಕ ಗುರುವಾರ ಮರಳಿ ಉತ್ಸವ ಮೂರ್ತಿಯನ್ನು ಚಿಕ್ಕದೇವಮ್ಮ ಬೆಟ್ಟಕ್ಕೆ ಮಂಗಳವಾದ್ಯ ವೀರಗಾಸೆ, ವಿವಿಧ ಕಲಾತಂಡಗಳೊಂದಿಗೆ ಕೊಂಡೊಯ್ಯಲಾಯಿತು.