ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕವನ್ನ ವ್ಯಸನ ಮುಕ್ತ ಮಾಡುವ ನಿಟ್ಟಿನಲ್ಲಿ ಓಲೆ ಮಠದ ಪರಮ ಪೂಜ್ಯ ಶ್ರೀ ಆನಂದ ದೇವರು ದುಶ್ಚಟಗಳ ಭಿಕ್ಷೆ, ಸದ್ಗುಣಗಳ ದೀಕ್ಷೆ" ಜನ ಜಾಗೃತಿ ಯಾತ್ರೆ ಎಂಬ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ.ಡಿಸೆಂಬರ್ 15-12-2025 ರಿಂದ ಮೇ 9 ರವರೆಗೆ ಪ್ರತಿ ಹಳ್ಳಿಗಳಿಗೆ ಬೆಳಿಗ್ಗೆ 6-00 ಗಂಟೆಯಿಂದ ಭಕ್ತರ ಮನೆ ಮನೆಗೆ ಶ್ರೀಗಳಿಂದ ಸದ್ಭಾವನಾ ಪಾದಯಾತ್ರೆ ಹಾಗೂ ಪ್ರತಿದಿನ ಸಾಯಂಕಾಲ 7-00 ಗಂಟೆಯಿಂದ ಪ್ರವಚನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಯುವಕರಲ್ಲಿನ ದುಶ್ಚಟಗಳ ಹೋಗಲಾಡಿಸಿ ರುದ್ರಾಕ್ಷಿ ಧಾರಣೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.