ಹೆಗ್ಗಡದೇವನಕೋಟೆ: ಮತಗಟ್ಟೆ ಮಟ್ಟದ ಅಧಿಕಾರಿಗಳ ಮೊದಲನೇ ಹಂತದ ತರಭೇತಿಗೆ ಗೈರಾಗಿದ್ದ ಸಿಬ್ಬಂದಿಗೆ ಪಟ್ಟಣದ ಮಿನಿ ವಿಧಾನಸೌಧದಲ್ಲಿ ತರಭೇತಿ
ಮತಗಟ್ಟೆ ಮಟ್ಟದ ಅಧಿಕಾರಿಗಳ ಮೊದಲನೇ ಹಂತದ ತರಭೇತಿಗೆ ಗೈರಾಗಿದ್ದ ಸಿಬ್ಬಂದಿಗೆ ಎಚ್.ಡಿ. ಕೋಟೆ ಪಟ್ಟಣದ ಮಿನಿ ವಿಧಾನಸೌಧದ ಮಹಾತ್ಮ ಗಾಂಧಿ ಸಭಾಂಗಣದಲ್ಲಿ ಬೆಳಿಗ್ಗೆ ೧೧ ರಿಂದ ತರಭೇತಿಯನ್ನು ಏರ್ಪಡಿಸಲಾಗಿತ್ತು. ಸುಮಾರು 50ಕ್ಕೂ ಹೆಚ್ಚಿನ ಸಿಬ್ಬಂದಿಗಳು ಮೊದಲ ಹಂತದ ತರಭೇತಿಯನ್ನು ಪಡೆದರು, ನುರಿತ ತರಭೇತುದಾರರಿಂದ ತರಭೇತಿಯನ್ನು ನೀಡಲಾಯಿತು. ಬೇಸಿಗೆಯಾದ್ದರಿಂದ ತರಭೇತುದಾರರಿಗೆ ಯಾವುದೇ ತೊಂದರೆಯಾಗದಂತೆ ವ್ಯವಸ್ಥೆಯನ್ನು ಮಾಡಲಾಗಿತ್ತು. ಅಲ್ಲದೇ ಅಂಚೆ ಮತದಾನಕ್ಕೆ ಅರ್ಜಿಗಳನ್ನು ಸಲ್ಲಿಸಲು ಮತಗಟ್ಟೆ ಅಧಿಕಾರಿಗಳಿಗೆ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಗ್ರೇಡ್ 2 ತಹಸೀಲ್ದಾರ್ ಸಣ್ಣರಾಮಪ್ಪ, ಶಿರೆಸ್ತೇದಾರ್ ಗಳಾದ ಕುಮಾರ್, ಮಹೇಶ್, ಸುನಿಲ್, ಸುಚೇಂದ್ರಕುಮಾರ್, ಪುರಸಭಾ ಮುಖ್ಯಾಧಿಕಾರಿ ಸುರೇಶ್ ಇದ್ದರು.