ಸಿರವಾರ: ಜಾಗೀರ ಪನ್ನೂರು ಗ್ರಾಮದಲ್ಲಿ ಡೆಂಘೀ ಜ್ವರ ನಿಯಂತ್ರಣ ಜನಜಾಗೃತಿ
Sirwar, Raichur | Mar 28, 2024 ಜಾಗೀರ ಪನ್ನೂರು ಗ್ರಾಮದಲ್ಲಿ ಸಂಶಯಾಸ್ಪದ ಡೆಂಘೀ ಜ್ವರ ಪ್ರಕರಣ ವರದಿಯಾಗುತ್ತಿರುವ ಕಾರಣ ಗ್ರಾಮದಲ್ಲಿ ಗುರುವಾರ ಜ್ವರ ನಿಯಂತ್ರಣ ಕ್ರಮಗಳ ಕುರಿತು ಜನಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವೈದ್ಯಾಧಿಕಾರಿ ಡಾ.ಅನಿಶ್ ಮಾತನಾಡಿ, ಆರೋಗ್ಯ ಇಲಾಖೆಯಿಂದ ಎರಡು ತಂಡಗಳ ರಚನೆ ಮಾಡಿ ಗ್ರಾಮದಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದೆ. ಸಮುದಾಯ ಅಧಿಕಾರಿಗಳು ಜ್ವರ ಸಮೀಕ್ಷೆ ಮಾಡುತ್ತಿದ್ದಾರೆಂದು ತಿಳಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಮತ್ತಿತರರು ಇದ್ದರು.