ಚಿಂಚೋಳಿ: ಬೀದಿ ನಾಯಿಗಳ ಹಾವಳಿ ವಿರುದ್ಧ ಸುಲೇಪೇಟದಲ್ಲಿ ಜಂಟಿ ಸಂಘಟನೆಗಳ ಹೋರಾಟ
ಚಿಂಚೋಳಿ ತಾಲೂಕಿನ ಸುಲೇಪೇಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೀದಿ ಹಾಗೂ ಹುಚ್ಚು ನಾಯಿಗಳ ಹಾವಳಿ ತೀವ್ರಗೊಂಡಿದೆ. ನಾಗರಿಕರು, ಮಹಿಳೆಯರು ಹಾಗೂ ವಿದ್ಯಾರ್ಥಿಗಳು ನಾಯಿ ದಾಳಿಗೆ ಒಳಗಾಗುತ್ತಿರುವ ಹಿನ್ನೆಲೆಯಲ್ಲಿ ಜಂಟಿ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ 4 ಗಂಟೆಗೆ ಹೋರಾಟ ನಡೆಯಿತು. ಈ ವೇಳೆ ಮಲ್ಲಿಕಾರ್ಜುನ ಮಾಳಗಿ, ಹಣಮಂತರಾವ ಪಾಟೀಲ್, ಅಂಬರೀಷ್ ಸುಂಕದ ಹಾಗೂ ಹಲವರು ಭಾಗವಹಿಸಿದರು.